ವಿವೇಚನಾಹೀನ ಯೋಜನೆ ವಿರುದ್ಧ ಚಳವಳಿ ಅಗತ್ಯ
anakan-2

ಲಿಂಗನಮಕ್ಕಿಿಯಿಂದ ಬೆಂಗಳೂರಿಗೆ ಕುಡಿಯುವ ನೀರನ್ನು ಒಯ್ಯುವ ಪ್ರಸ್ತಾಾಪ ಈಗ ಜಿಲ್ಲೆೆಯಲ್ಲಿ ಹೋರಾಟದ ಕಾವನ್ನು ಪಡೆದುಕೊಂಡಿದೆ. ಚಳವಳಿ ರೂಪದಲ್ಲಿ ಇದನ್ನು ಪ್ರಬಲವಾಗಿ ವಿರೋಧಿಸಲು ಸಾಹಿತಿಗಳು, ಪರಿಸರ ಹೋರಾಟಗಾರರು, ಮಠಾಧೀಶರು, ರಾಜಕೀಯ ಮತ್ತು ಸಂಘ-ಸಂಸ್ಥೆೆಗಳ ಮುಖಂಡರು ಹೆಜ್ಜೆೆ ಇಟ್ಟಿಿದ್ದಾಾರೆ. ಸರ್ಕಾರದ ವಿವೇಚನಾಹೀನ ವಿಚಾರಗಳು ಎಷ್ಟೊೊಂದು ಅನಾಹುತವನ್ನು ಸೃಷ್ಟಿಿಸುತ್ತವೆ ಎನ್ನುವುದಕ್ಕೆೆ ಇದೊಂದು ಉತ್ತಮ ಉದಾಹರಣೆ.
ಶರಾವತಿ ನದಿ ಮಲೆನಾಡಿನ ನಾಡಿ ಮಿಡಿತ, ಇಲ್ಲಿನ ಜನರ ಬದುಕಿನೊಂದಿಗೆ ಹಾಸುಹೊಕ್ಕಾಾಗಿದೆ, ಮಲೆನಾಡಿನ ಹೆಗ್ಗುರುತಾಗಿದೆ. ಅದೊಂದು ಜೀವನದಿ. ಅದು ಜೋಗ ಜಲಪಾತವನ್ನು ಸೃಷ್ಟಿಿಸಿ ಜಿಲ್ಲೆೆಗೆ ಹೊಸ ಮೆರುಗನ್ನೇ ತಂದುಕೊಟ್ಟಿಿದೆ. ಮಲೆನಾಡಿನ ಜೊತೆ ಶರಾವತಿ ಹೊಂದಿರುವುದು ಕರುಳಬಳ್ಳಿಿಯ ಸಂಬಂಧ. ಇನ್ನೊೊಂದು ಅರ್ಥದಲ್ಲಿ ಹೇಳಬೇಕೆಂದರೆ ಅಮ್ಮ-ಮಕ್ಕಳ ಸಂಬಂಧ.
ನಮ್ಮೆೆಲ್ಲರ ಬದುಕಿನ ಭಾಗವಾಗಿರುವ ಶರಾವತಿಗೆ ಈಗ ಅಪಾಯ ಬಂದೊದಗಿದೆ. ಈ ನದಿಯ ಲಿಂಗನಮಕ್ಕಿಿ ಅಣೆಕಟ್ಟಿಿನಿಂದ ಸುಮಾರು  433 ಕಿ. ಮೀ. ದೂರವಿರುವ ಬೆಂಗಳೂರಿಗೆ ನೀರನ್ನು ಒಯ್ಯುವ ಯೋಜನೆ ಇದಾಗಿದೆ. ರಾಕ್ಷಸನಂತೆ ಬೆಳೆಯುತ್ತಿಿರುವ ಬೆಂಗಳೂರಿಗೆ ಕುಡಿಯುವ ನೀರು ಒದಗಿಸುವ ಸಮಸ್ಯೆೆ ಎದುರಾದಾಗ 2010ರಲ್ಲಿ ಸಮಿತಿಯೊಂದು ನೀಡಿದ ವರದಿಯು ಉಪಮುಖ್ಯಮಂತ್ರಿಿ ಪರಮೇಶ್ವರ್ ಅವರಿಗೆ ನೆನಪಾಗಿ, ಈ ಯೋಜನೆಯ ಬಗ್ಗೆೆ ವಿಸ್ತತ ಯೋಜನಾ ವರದಿ ತಯಾರಿಸಲು ಸೂಚಿಸಿದ್ದಾಾರೆ.
ಇದರಿಂದ ಮಲೆನಾಡಿಗರು ಉರಿದುಬೀಳುವಂತಾಗಿದೆ. ಇಲ್ಲಿಂದ ನೀರು ಸಾಗಿಸುವುದು ಎಷ್ಟು ವೈಜ್ಞಾಾನಿಕವಾದುದು ಎನ್ನುವುದು ಮೊದಲ ಪ್ರಶ್ನೆೆಯಾಗಿದೆ. ಶಿವಮೊಗ್ಗಕ್ಕೆೆ ಮಲೆನಾಡಿನ ಹೆಬ್ಬಾಾಗಿಲು ಎಂಬ ಹೆಸರಿದೆ. ಇತ್ತೀಚೀನ ವರ್ಷಗಳಲ್ಲಿ ಈ ಹೆಬ್ಬಾಾಗಿಲು ಹಿಂಬಾಗಿಲಾಗತೊಡಗಿದೆ. ಇಲ್ಲಿನ ಪರಿಸರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಲೇ ಇದೆ. ಈಗ ನೀರು ಒಯ್ಯುವ ಮೂಲಕ ಇಲ್ಲಿನ ಫಲವತ್ತಾಾದ ಭೂಮಿ, ದಟ್ಟ ಕಾನನ, ಹೊಲ-ಗದ್ದೆೆ-ತೋಟಗಳು ತಮ್ಮ ಅಸ್ವಿಿತ್ವ ಕಳೆದುಕೊಳ್ಳಲಿವೆ. ಮತ್ತೆೆ ಸಾವಿರಾರು ಜನರು ಜಮೀನು ಕಳೆದುಕೊಂಡು ಪರಿತಪಿಸುವ ಕಾಲ ಎದುರಾಗಬಹುದಾಗಿದೆ.
ಲಿಂಗನಮಕ್ಕಿಿಯ ಮೇಲೆ ಸರ್ಕಾರಕ್ಕೆೆ ಕಣ್ಣು ಬಿದ್ದುದೇಕೆ ಎನ್ನುವುದಕ್ಕೆೆ ಒಂದು ಪ್ರಮುಖ ಕಾರಣವಿದೆ. ರಾಜ್ಯದ ಯಾವುದೇ ಜಲಾಶಯದಲ್ಲಿ ಇಲ್ಲದಷ್ಟು ಶುದ್ಧ ನೀರು ಇಲ್ಲಿದೆ. ಕುಡಿಯುವುದಕ್ಕೆೆ ಹೇಳಿ ಮಾಡಿಸಿದಂತಿದೆ ಇಲ್ಲಿನ ಜಲ. ಯಾವುದೇ ಮಾಲಿನ್ಯವಿಲ್ಲ. ಕಾನನದ ಮೂಲೆಗಳಿಂದ ಉದ್ಭವಿಸಿ ಬರುವ ತಾಜಾ ನೀರು. ಸರ್ಕಾರದ ಪ್ರಕಾರ, ಈ ನೀರು ವಿದ್ಯುತ್ ಉತ್ಪಾಾದನೆಯಾದ ನಂತರ ಅನಶ್ಯಕವಾಗಿ ಪೋಲಾಗಿ ಸಮುದ್ರಕ್ಕೆೆ ಸೇರುತ್ತಿಿದೆ. ಆದರೆ ಸಮುದ್ರಕ್ಕೆೆ ಸೇರುವ ಮುನ್ನ ಎಷ್ಟೋೋ ಹಳ್ಳಿಿಗಳಿಗೆ ಆಸರೆಯಾಗಿದೆ. ಸಾವಿರಾರು ಎಕರೆ ಜಮೀನುಗಳಿಗೆ ನೀರುಣಿಸುತ್ತಿಿದೆ. ಮೃಗ-ಪಕ್ಷಿಗಳಿಗೆ  ನೆರವಾಗುತ್ತಿಿದೆ.
 ಲಿಂಗನಮಕ್ಕಿಿಯನ್ನು ವಿದ್ಯುತ್ ಉತ್ಪಾಾದನೆಗೆಂದೇ ನಿರ್ಮಿಿಸಲಾಗಿದೆ. ಆದರೆ ಕುಡಿಯಲು ಬೇಕೆಂದು ಅಲ್ಲ. ಸರ್ಕಾರಕ್ಕೆೆ ವಿದ್ಯುತ್ ಪೂರೈಕೆಗಿಂತ ಈಗ ನೀರೊದಗಿಸುವ ಸಮಸ್ಯೆೆ ಹೆಚ್ಚಾಾಗಿದೆ. ಹಾಗಾಗಿ ಬೆಂಗಳೂರಿಗರ ಹೆಚ್ಚುತ್ತಿಿರುವ ನೀರಿನ ದಾಹ ತಣಿಸಲು ಲಿಂಗನಮಕ್ಕಿಿಯಿಂದ ನೀರು ಸಾಗಿಸುವ ಸುಮಾರು 13 ಸಾವಿರ ಕೋಟಿ ರೂ. ನ ಯೋಜನೆಗೆ ಮುಂದಾಗಿದೆ.
ಬೆಂಗಳೂರು  ಅತಿ ಹೆಚ್ಚು ನೀರು ಕೊರತೆ ಎದುರಿಸುತ್ತಿಿರುವ ನಗರವಾಗಿದೆ. ಇದನ್ನು ತಪ್ಪಿಿಸಲು ಸರ್ಕಾರಗಳು ಎಷ್ಟೋೋ ಕಾರ‌್ಯಕ್ರಮ ರೂಪಿಸಬಹುದಿತ್ತು. ಮೊದಲನೆಯದಾಗಿ, ಜನಸಾಂದ್ರತೆ ಹೆಚ್ಚದಂತೆ ನೋಡಿಕೊಳ್ಳಬಹುದಿತ್ತು. ಕೈಗಾರಿಕೆಗಳು ಬೆಂಗಳೂರಿನ ಹೊರತಾಗಿ ಇತರ ಜಿಲ್ಲೆೆಯತ್ತ ಅಥವಾ ಪಕ್ಕದ ಜಿಲ್ಲೆೆಗೆ ಬರುವಂತೆ ಮಾಡಬಹುದಿತ್ತು. ವಿಮಾನ ನಿಲ್ದಾಾಣದ ಸೌಲಭ್ಯ ಒದಗಿಸಬಹುದಿತ್ತು. ಎಲ್ಲ ಸಂಸ್ಥೆೆಗಳೂ ಬೆಂಗಳೂರು ಕೇಂದ್ರಿಿತವಾಗಿ ಇರಬೇಕೆಂದೇನಿಲ್ಲ. ಐಟಿ-ಬಿಟಿ ಮತ್ತು ಸಿದ್ಧ ಉಡುಪು ಕೇಂದ್ರಗಳನ್ನು ಇತರ ಜಿಲೆಯಲ್ಲೂ ಸ್ಥಾಾಪಿಸಬಹುದಿತ್ತು. ವಿದ್ಯಾಾವಂತರೆಲ್ಲ ಬೆಂಗಳೂರಿನತ್ತ ಮುಖಮಾಡುತ್ತಿಿರುವುದರಿಂದ, ಅಲ್ಲಿಯೇ ನೌಕರಿ ಮಾಡಲು ಮುಂದಾಗುತ್ತಿಿರುವುದರಿಂದ ಜನಸಾಂದ್ರತೆ ಹೆಚ್ಚತೊಡಗಿದೆ. ಮೂಲಸೌಕರ‌್ಯ ಒದಗಿಸಲು ಸರಕಾರ ಪರದಾಡುವಂತಾಗಿದೆ.
ಬೆಂಗಳೂರಿನಲ್ಲಿರುವ ಕೆರೆಗಳನ್ನೆೆಲ್ಲ ಮುಚ್ಚಿಿ, ಹೈಟೆಕ್ ಕಟ್ಟಡಗಳನ್ನು ನಿರ್ಮಿಿಸಲಾಗುತ್ತಿಿದೆ. ಐತಿಹಾಸಿಕ ಕೆರೆಗಳೇ ಇಲ್ಲದಂತಾಗಿವೆ. ಇರುವ ಎರಡು- ಮೂರು ನದಿಗಳ ನೀರನ್ನೂ ಸಮರ್ಪಕವಾಗಿ ಬಳಸಿಕೊಳ್ಳಲು ಮುಂದಾಗುತ್ತಿಿಲ್ಲ. ಇದನ್ನೂ ಮುಚ್ಚಿಿ ಕಟ್ಟಡ ಎಬ್ಬಿಿಸುವ ಕೆಲಸ ಮತ್ತೊೊಂದೆಡೆ ನಡೆಯುತ್ತಿಿದೆ. ಇದರಿಂದಾಗಿ ಮಳೆ ಬಂತೆಂದರೆ ಬೆಂಗಳೂರು ಅರ್ಧದಷ್ಟು ಮುಳುಗುತ್ತಿಿದೆ. ಇಷ್ಟಾಾದರೂ ಇದಕ್ಕೆೆ ಪರಿಹಾರ ಕಂಡುಕೊಳ್ಳಲು ಸರ್ಕಾರಗಳು ಮುಂದಾಗದೆ, ಬೆಂಗಳೂರಿನ ಮೇಲೆ ಹೆಚ್ಚುತ್ತಿಿರುವ ಒತ್ತಡವನ್ನು ಕಡಿಮೆ ಮಾಡಲು ಸಮರ್ಪಕ ಯೋಜನೆ ಸಿದ್ಧಪಡಿಸದೆ ಇಲ್ಲಸಲ್ಲದ ಯೋಜನೆ ರೂಪಿಸುತ್ತಿಿವೆ.
ಬೆಂಗಳೂರಿನಲ್ಲಿ ಬೀಳುತ್ತಿಿರುವ ಮಳೆಯಿಂದಲೇ 16 ಟಿಎಂಸಿ ನೀರನ್ನು ಪಡೆಯಲು ಸಾಧ್ಯವಿದೆ ಎಂದು ಪರಿಸರ ತಜ್ಞರು ಹೇಳಿದ್ದಾಾರೆ. ಇದನ್ನು ವೈಜ್ಞಾಾನಿಕವಾಗಿ ಉಪಯೋಗಿಸಿಕೊಳ್ಳುವ ಕಲೆಯನ್ನು ನಮ್ಮನ್ನಾಾಳುವವರು ಅರಿಯಬೇಕಿತ್ತು. ಮಳೆ ನೀರು ಕೊಯ್ಲನ್ನು ಸುಲಭದಲ್ಲಿ ಕಟ್ಟಡಗಳಿಗೆ ಅಳವಡಿಸಬಹುದಿತ್ತು. ಆದರೆ ಇಂದು ಏನಾಗಿದೆ. ಯದ್ವಾಾತದ್ವಾಾ ಹರಿಯಬಿಟ್ಟು ಊರೇ ಮುಳುಗುತ್ತಿಿದೆ. ಇಂತಹ ಯೋಜನೆಗೆ ಸಾವಿರಾರು ಕೋಟಿ ರೂ. ವ್ಯಯಿಸಬಹುದಿತ್ತು. ಅದನ್ನು ಬಿಟ್ಟು
ಎತ್ತಿಿನಹೊಳೆ, ನೇತ್ರಾಾವತಿ ತಿರುವು ಮೊದಲಾದ ಯೋಜನೆ, ಈಗ ಲಿಂಗನಮಕ್ಕಿಿ ನೀರು ಸಾಗಿಸುವುದಕ್ಕೆೆ ಮುಂದಾಗಿದೆ.
ಇತ್ತೀಚಿನ ಕೆಲವು ವರ್ಷಗಳಿಂದ ಮಲೆನಾಡಿನಲ್ಲೇ ಮಳೆಯ ಪ್ರಮಾಣ ಇಳಿಮುಖವಾಗುತ್ತಿಿದೆ. ಮುಂಗಾರು ಸಮರ್ಪಕವಾಗಿ ಬೀಳುತ್ತಿಿಲ್ಲ. ಕುಡಿಯುವ ನೀರಿನ ಸಮಸ್ಯೆೆ ಇಲ್ಲಿಯೇ ಎದುರಾಗುತ್ತಿಿದೆ. ಆದರೂ ಇದನ್ನೆೆಲ್ಲ ಗಮನಿಸದೆ ಮಲೆನಾಡೆಂದರೆ ಕುಬೇರನ ಖಜಾನೆ ಎಂದರಿತಿರುವ ಸರಕಾರಗಳಿಗೆ, ಇಲ್ಲಿನ ಸೌಲಭ್ಯಗಳನ್ನೆೆಲ್ಲ ಬೆಂಗಳೂರಿಗೆ ಸಾಗಿಸುವ ಯೋಚನೆ ಶುರುವಾಗಿದೆ. ಇಂತಹ ಮೂರ್ಖತನದ ಪ್ರಸ್ತಾಾಪವನ್ನು ಕೈಬಿಟ್ಟು ಕೇವಲ ವಿದ್ಯುತ್ ಉತ್ಪಾಾದನೆಗೆ ಮಾತ್ರ ಇದನ್ನು ಮೀಸಲಿಡಬೇಕಿದೆ. ಈ ಪ್ರಸ್ತಾಾಪದ ವಿರುದ್ದ ಜಿಲ್ಲೆೆಯಲ್ಲಿ ಹೋರಾಟ ಆರಂಭವಾಗಿದೆ. ವಿವಿಧ ತಾಲೂಕಿನಲ್ಲಿ ಪ್ರತಿಭಟನೆ, ಮುಖ್ಯಮಂತ್ರಿಿಗೆ ಮನವಿ ಕಳುಹಿಸುವಿಕೆ ನಡೆಯುತ್ತಿಿದೆ. ಜುಲೈ 10ರಂದು ಶಿವಮೊಗ್ಗ ಜಿಲ್ಲಾಾ ಬಂದ್‌ಗೆ ಕರೆಕೊಡಲಾಗಿದೆ.
 ಇನ್ನಾಾದರೂ ಎಚ್ಚೆೆತ್ತುಕೊಂಡು ಸರಕಾರ ಈ ವಿವೇಚನಾಹೀನ ಯೋಜನೆಯನ್ನು ಕೈಬಿಡಬೇಕು. ಏಕೆಂದರೆ, ಇದು ಮಲೆನಾಡಿನ ಜೀವ ಪರಿಸರ ಮತ್ತು ಜನಜೀವನದ ಭವಿಷ್ಯದ ಗಂಭೀರ ಪ್ರಶ್ನೆೆಯಾಗಿದೆ. ಆದ್ದರಿಂದ ಮಲೆನಾಡಿಗರು ಸಿಡಿದೇಳಲು ಸನ್ನದ್ಧರಾಗಿದ್ದಾಾರೆ. ಚಳವಳಿಗಳಿಗೆ ತಾಯ್ನೆೆಲವಾಗಿರುವ ಇಲ್ಲಿ ಶರಾವತಿ ಉಳಿಸಲು ಇನ್ನೊೊಂದು ಚಳವಳಿ ಆರಂಭವಾದರೂ ಆಶ್ಚರ್ಯವೇನಿಲ್ಲ.

published on june 26-2019
...........................

Comments

Popular posts from this blog