ನೀನಿಲ್ಲದೆ (ನೈರುತ್ಯ ಮಾನ್ಸೂನ್) ನಮಗೇನಿದೆ...? 
ankana-3


ಎಲ್ಲಿ ನೋಡಿದರೂ ಮಳೆಗೆ ಹಾಹಾಕಾರ. ಮಳೆ ಇನ್ನೂ ಬಂದಿಲ್ಲವಲ್ಲ ಎಂಬ ಮಾತು. ಮೇಳಗಾಲದ ಛಾಯೆಯೇ ಮಾಯವಾಗಿ ಬಿಸಿಲು ಸುಡುತ್ತಿಿದೆ. ಕರಾವಳಯಿಂದ ಘಟ್ಟ ಏರದ ಮುಂಗಾರು ಜನರ ನಿರಿಕ್ಷೆಯನ್ನು ಹುಸಿಗೊಳಿಸಿದೆ.
 ಭೂಮಿಯ ಮತ್ತು ಪರಿಸರದ ವಾತಾವರಣವನ್ನು ಹಾಳು ಮಾಡಿದ್ದು ಬುದ್ಧಿಿವಂತನಾದ ಮಾನವ.  ಪ್ರಕೃತಿ ಎಷ್ಟು ಸೂಕ್ಷ್ಮವಾಗಿದೆ ಎಂದರೆ ನಾವಿಂದು ಮಳೆ ಕಾಡುಗಳನ್ನು ನಾಶ ಮಾಡಿಕೊಂಡು ನಗರೀಕರಣವೇ ನಮ್ಮ ಪ್ರಗತಿ ಎಂಬ ದಾರಿಯಲ್ಲಿ ಜೀವನಕ್ಕೆೆ ಆಧಾರವಾದ ಜೀವನದಿಗಳನ್ನು ಒಂದಕ್ಕೊೊಂದು ಜೋಡಣೆ ಮಾಡುತ್ತ ಸಾವಿರಾರು ಕಿಲೋಮೀಟರ್ ದೂರದ ಬರಗಾಲದ ಪ್ರದೇಶಗಳಿಗೆ ನೀರುಣಿಸುವ ವಿಚಾರವನ್ನಿಿಟ್ಟುಕೊಂಡು ಪ್ರಗತಿಯನ್ನು ಮಾಡುತ್ತಿಿದ್ದೇವೆ. ನೀರಿಲ್ಲದ ಜಾಗಗಳಿಗೆ ನೀರು ಕೊಡುವ ವಿಚಾರಗಳು ಒಳ್ಳೆೆಯ ವಿಚಾರಗಳೇ. ಒಪ್ಪಬಹುದು. ಆದರೆ, ಅನಗತ್ಯವಾಗಿ ನದಿಗಳನ್ನು ಅವು ಹರಿಯುವ ದಿಕ್ಕಿಿಗೆ ಬಿಡುವುದರ ಬದಲು ಬೇಕೆಂದ ಹಾಗೆ ಜೋಡಣೆ ಮಾಡಿ ಅವ್ಯವಸ್ಥೆೆ ಮಾಡುತ್ತಿಿದ್ದೇವೆ.
 ನದಿಗಳ ತಂಟೆಗೆ ಎಂದೂ ಹೋಗಬರದು. ಏಕೆಂದರೆ ಒಂದು ನದಿಗೆ ಅನೇಕ ಕಡೆ ಅಣೆಕಟ್ಟುಗಳನ್ನು ಕಟ್ಟಿಿದರೆ ಆ ನದಿಯ ನೀರು ಸಮುದ್ರಕ್ಕೆೆ ಹೋಗಿ ಸೇರುವ ಅಂಶ ಕಡಿಮೆಯಾಗುತ್ತದೆ. ಇದರಿಂದ ಸಮುದ್ರದಲ್ಲಿರುವ ಜೀವಿಗಳ ಬದುಕು ಅಸ್ತವ್ಯಸ್ತವಾಗುತ್ತದೆ. ಕಾರಣ ಪ್ರವಾಹಗಳಿಂದ ನದಿಗಳಲ್ಲಿ ಕೊಚ್ಚಿಿ ಹೋಗುವ ಭೂಮಿಯಲ್ಲಿನ ಫಲವತ್ತಾಾದ ಮಣ್ಣು ಸಮುದ್ರಕ್ಕೆೆ ಹೋಗಿ ಸೇರುತ್ತದೆ. ಈ ಮಣ್ಣಿಿನಲ್ಲಿರುವ ಪೋಷಕಾಂಶಗಳು ಸಮುದ್ರದ ಜೀವಿಗಳಿಗೆ ಆಹಾರವಾಗುತ್ತದೆ.  ಈ ರೀತಿಯಲ್ಲಿ ನದಿ ಸಮುದ್ರಕ್ಕೆೆ ಮರು ಪೂರಣವಾಗುತ್ತದೆ. ಈ ವಿಚಾರ ಎಷ್ಟು ಜನಗಳಿಗೆ ಗೊತ್ತಿಿದೆ.
 ಕಾಡಿನ ತಂಟೆಗೆ ಹೋಗಿ ಏನು ಮಾಡಿಕೊಂಡಿದ್ದೇವೆ ಎನ್ನುವುದನ್ನು ನಾವೇ ಅನುಭವಿಸುತ್ತಿಿದ್ದೇವೆ. ನದಿಗಳಿಗೆ ಅಣೆಕಟ್ಟುಗಳನ್ನು ಕಟ್ಟಿಿ ಲಕ್ಷಗಟ್ಟಲೆ ಎಕರೆ ಆಹಾರ ಬೆಳೆಯುವ ಜಮೀನುಗಳಿಗೆ ನೀರುಣಿಸಿ ಆಹಾರ ಬೆಳೆಯುವ ಕ್ರಮ ತಪ್ಪಲ್ಲ. ಆದರೆ ಒಂದು ನದಿಗೆ ಎಷ್ಟು ಕಡೆ ಅಣೆಕಟ್ಟು ಕಟ್ಟಬಹುದು ಎಂಬ ವಿಚಾರ ತುಂಬಾ ಮುಖ್ಯ. ಏಕೆಂದರೆ, ಗಂಗಾ ನದಿಗೆ 24 ಕಡೆ ಅಣೆಕಟ್ಟುಗಳನ್ನು ಕಟ್ಟಿಿ ವಿದ್ಯುತ್‌ನ್ನು ತಯಾರು ಮಾಡಲಾಗುತ್ತಿಿದೆ. ಇದರ ಪರಿಣಾಮ ಗಂಗೆ ಎರಡು ವರ್ಷಗಳ ಹಿಂದೆ ಸರಿಯಾಗಿ ಉತ್ತರ ಕೊಟ್ಟಿಿದ್ದಳು. ಈಗ ನೇತ್ರಾಾವತಿಗೆ ಹರಿದುಹೋಗಿ ಸೇರುವ ನೀರನ್ನು ತಪ್ಪಿಿಸಿ ಎತ್ತಿಿನ ಹೊಳೆ ಎಂಬ ಯೋಜನೆಯಡಿಯಲ್ಲಿ ಇದ್ದಬದ್ದ ಹಳ್ಳಗಳನ್ನು ತಿರುಗಿಸಿ ಬಯಲುಸೀಮೆಗೆ ನೀರು ಕೊಟುವ ಯೋಜನೆ ನಮ್ಮ ಮುಂದಿದೆ.
1600 ಕಿಲೋಮೀಟರ್ ಉದ್ದದ ಮಲೆನಾಡಿನಲ್ಲಿ ಅನೇಕ ಸಾಹಿತಿಗಳು ಹುಟ್ಟಿಿದ್ದಾಾರೆ.  ಅವರೆಲ್ಲರೂ ಇಲ್ಲಿನ ಕಾಡಿನ ಸೊಬಗನ್ನು ವರ್ಣಿಸಿದ್ದಾಾರೆ. ಜೋಗದ ಕವಿ ನಿಸಾರ್ ಅಹ್ಮದ್ ಅವರ ಸಹ್ಯಾಾದ್ರಿಿಯ ವರ್ಣನೆ  ಚಿಂತನೆ ಮಾಡಬೇಕಾದ್ದು. ಮಳೆಗಾಲ ಮೂರು ತಿಂಗಳು ಅನುಭವಿಸಿ ಅದರ ವರ್ಣನೆಯನ್ನು ಹೇಳುವುದು ವರ್ಣಾತೀತ. ಆಷಾಢ ಮಾಸದಲ್ಲಿ ಸೂರ್ಯನನ್ನು ಕಾಣುತ್ತಿಿರಲಿಲ್ಲ ನಾವು.  ಜಮೀನಿಗೆ ಹೋಗಿ ನಡುಕ ಹುಟ್ಟಿಿಸಿಕೊಂಡು ಮನೆಗೆ ಬಂದು  ಬೆಂಕಿ ಹಾಕಿಕೊಂಡು ಚಳಿ ಕಾಯಿಸುವ, ಸುಖವಾದ ಆ ಬೆಚ್ಚಗಿನ ಅನುಭವವನ್ನು ಪಡೆಯುವುದೇ ಮಲೆನಾಡಿನಲ್ಲಿ.
  2011 ರಿಂದ ಮಲೆನಾಡಿನಲ್ಲಿ ಮಳೆ ಏರುಪೇರಾಗಿದೆ.  ತುಂಗಾ ನದಿ ಮೈದುಂಬಿ ಹರಿಯುವುದೂ ಅಪರೂಪವಾಗಿದೆ. ಹಾಗಾಗಿ ಇದು ಮಲೆನಾಡು ಹೌದೇ ಎಂಬ ಅನುಮಾನ ಹುಟ್ಟುತ್ತದೆ. ಜೋಗ ಜಲಪಾತ ಜಗತ್ಪ್ರಸಿದ್ಧ. ಇಲ್ಲಿ ವಿದ್ಯುತ್ ಏನೋ ತಯಾರು ಮಾಡುತ್ತಿಿದ್ದೇವೆ, ಆದರೆ ಮಳೆಯೇ ಬರುತ್ತಿಿಲ್ಲವಲ್ಲ ಎಂದರೆ ಮಾನವನ ಶಕ್ತಿಿಯ ಪರಿಮಿತಿ ಇಲ್ಲಿ ಕಂಡುಕಾಣುತ್ತದೆ. ನಾವೆಲ್ಲ ಏನಾದರೂ ಮಾಡಬಹುದು ಬುದ್ಧಿಿವಂತಿಕೆಯಿಂದ. ಆದರೆ ಮಳೆ ತರಿಸಲಾಗುವುದಿಲ್ಲವಲ್ಲ. ಪ್ರಕೃತಿಯನ್ನು ಅನುಸರಿಸಿಕೊಂಡು ನಮ್ಮ ಬುದ್ಧಿಿವಂತಿಕೆ ಹೋದರೆ ಮುಂದಿನ ದಿನಗಳಲ್ಲಿ ಈ ಸುಂದರ ಭೂಗ್ರಹದಲ್ಲಿ ನಾವು ಬದುಕಬಹುದೇ ? ಭೂಮಿಯ ಚರಿತ್ರೆೆಯಲ್ಲಿ  ಅದೆಷ್ಟೋೋ ಹಿಮಯುಗಗಳು ಬಂದು ಹೋಗಿವೆ. ಭೂ ಗ್ರಹದ ಮೇಲೆ ಅದರ ಮೇಲ್ಮೈನಲ್ಲಿ ಎಲ್ಲಾಾ ಕಾಡು ತುಂಬಿಕೊಂಡರೆ ಮತ್ತೆೆ ಹಿಮಯುಗ ಬರುತ್ತದೆ. ಕಾರಣ ಮರಗಳು ಭೂಮಿಯ ವಾತಾವರಣದಲ್ಲಿನ ಎಲ್ಲಾಾ ಇಂಗಾಲದ ಡೈ ಆಕ್ಸೈಡನ್ನು ಹೀರಿಕೊಂಡು ಬಿಡುತ್ತವೆ. ಆಗ ಹಿಮಯುಗ ಬರಲೇಬೇಕು. ಕಾಡು ಕಡಿಮೆಯಾದರೆ ? ಆಗ ಬಿಸಿಯುಗ ಬಂದೇ ಬರುತ್ತದೆ. ಇವೆರಡೂ ಒಂದಕ್ಕೊೊಂದು ಪೂರಕ. ಇಲ್ಲಿ ನಾವು ಹೇಗಿರಬೇಕು ಎಂಬ ಪ್ರಶ್ನೆೆಗೆ ಉತ್ತರ ಸಿಗುತ್ತದೆ.
ಈ ವರ್ಷದ ಮಳೆಗಾಲ ಇನ್ನೂ ಆರಂಭವಾಗಿಯೇ ಇಲ್ಲ. ಒಮ್ಮೆೆ ಮಳೆ ವಾತಾವರಣ. ಮತ್ತೆೆ ಅದೇ ಪ್ರಖರ ಬಿಸಿಲು. ಶೇ. 75ರಷ್ಟು ಮಳೆ ಕೊರತೆಯಿಂದ ಜಿಲ್ಲೆೆಯ ಜನತೆ  ಕಂಗಾಲಾಗಿದೆ. ಭವಿಷ್ಯದ ಬಗ್ಗೆೆ ಚಿಂತಿತರಾಗುವಂತಾಗಿದೆ. ಆಗುಂಗೆಯಲ್ಲೇ ಮಳೆ ಕೊರತೆ, ತೀರ್ಥಹಳ್ಳಿಿಯಲ್ಲಿ ನೀರು ಹರಿಯುತ್ತಿಿಲ್ಲ. ಮಳೆಕಾಡುಗಳ ಜಾಗದಲ್ಲೇ ಮಳೆಯಿಲ್ಲ. ಎಲ್ಲರೂ ಆಗಸದತ್ತ ನೋಡುತ್ತಿಿದ್ದಾಾರೆ. ಮಳೆಗಾಗಿ ಪೂಜೆ, ಪ್ರಾಾರ್ಥನೆಯೂ ನಡೆದಿದೆ, ನಡೆಯುತ್ತಿಿದೆ. ಆದರೂ ಮುಂಗಾರು ಬಂದಿಲ್ಲ. ವರುಣನ ಕೃಪೆ ಆಗಿಲ್ಲ.       
ಗಮನಿಸಿ. ಭತ್ತದ ಕಣಜವಾಗಿದ್ದ ಜಿಲ್ಲೆೆಯಲ್ಲೇ ಇಂದು ಭತ್ತದ ಬೆಳೆ ತೀರಾ ಇಳಿಮುಖವಾಗಿದೆ. ಅಕ್ಕಿಿಯನ್ನು ಖರೀದಿ ಮಾಡಿ ತಂದು ಉಣ್ಣುವ ಸ್ಥಿಿತಿ ಎದುರಾಗಿದೆ. ನೀರಿಲ್ಲದೆ ಬೆಳೆ ಬೆಳೆಯುವುದೆಲ್ಲ ಕಡಿಮೆಯಾಗುತ್ತಿಿದೆ. ಇದರಿಂದಾಗಿ ಹಲವೆಡೆ ಹೊಲವನ್ನು ತೋಟ ಮಾಡಿಕೊಂಡರು. ಪ್ರಕೃತಿಯ ಮುನಿಸು ಹೆಚ್ಚಾಾದ್ದರಿಂದ ಈಗ  ಆ ತೋಟವೂ ನೀರಿಲ್ಲದೆ ಸಾಯತೊಡಗಿದೆ. ಅದನ್ನು ಕಡಿದು  ರಿಯಲ್ ಎಸ್ಟೇಟ್ ದಂಧೆ ಆರಂಭಿಸಲಾಗಿದೆ. ದುರಾಸೆಯ ಬದುಕು ನಮ್ಮಿಿಂದ ಎಲ್ಲವನ್ನೂ ಕಸಿದುಕೊಳ್ಳುತ್ತಿಿದೆ. ಕುಡಿಯಲು ನೀರಿಲ್ಲದೆ ಪರಿತಪಿಸುವ ಸ್ಥಿಿತಿ ತುಂಗೆಯ ದಡದಲ್ಲಿರುವವರದ್ದಾಾಗಿದೆ. ನಗರದಲ್ಲೆೆ ಸದ್ಯ ಎರಡು ದಿನಕ್ಕೊೊಮ್ಮೆೆ ನೀರು. 15 ದಿನದಲ್ಲಾಾದರೂ ಮಳೆ ಸುರಿದು, ನೀರು ಹರಿದು, ಅಂತರ್ಜಲ ಉದ್ಭವವಾಗದಿದ್ದರೆ ಶಿವಮೊಗ್ಗ ಮಲೆನಾಡಾಗಿ ಉಳಿಯದೆ ಬೆಂಗಾಡಾಗಲಿದೆ. ಮಲೆನಾಡಿನ ಹೆಬ್ಬಾಾಗಿಲೆಂಬ ಹೆಸರನ್ನು ಬದಲಿಸಿ ಹಿಂಬಾಗಿಲೆಂದು ಬರೆಯಬೇಕಾಗುತ್ತದೆ. 
 ನಾವು ಬದುಕುವ ಬೆಚ್ಚನೆಯ ಜೀವನಕ್ಕೆೆ ಪೂರಕವಾದ ವಾತಾವರಣವನ್ನು ಪ್ರಕೃತಿಯೇ ಮಾಡುತ್ತಿಿದೆ. ಅದನ್ನು ಏರುಪೇರು ಮಾಡಬಾರದೆಂಬ ಎಚ್ಚರಿಕೆ ಪ್ರಕೃತಿ ಕೊಡುತ್ತಲೇ ಇದೆ. ನ್ಯಾಾನೋ ಎಂಬ ತಂತ್ರಜ್ಞಾಾನದ ಮುಂದಿನ ಹಂತಕ್ಕೆೆ ನಾವು ಹೋಗುತ್ತಿಿದ್ದೇವೆ. ಮೆಗಾ ಕಂಪ್ಯೂಟರ್‌ಗಳು ಬರಬಹುದು. ಸೂಕ್ಷ್ಮಾಾತಿಸೂಕ್ಷ್ಮ  ಯಂತ್ರಗಳು ಬರಬಹುದು.  ಆದರೆ ನಮಗೆ ಮಳೆ ಎನ್ನುವುದು ಬೇಕೇ ಬೇಕು. ಏನಿದ್ದರೂ ಪರಿಸರ ಉಳಿದರೆ ಮಾತ್ರ ಬದುಕು. ತುಂಗೆ ಭೋರ್ಗರೆದರೆ ಮಾತ್ರ ಕುಡಿಯಲು ನೀರು,  ಭೂಮಿಯಲ್ಲಿ ಅಂತರ್ಜಲ ಹುಟ್ಟುವುದು. ಇದನ್ನು ಕಾಪಾಡಿಕೊಳ್ಳಲು ನಾವು ಚಿಂತನೆ ಮಾಡಬೇಕಿದೆ.
published on june29-2019
...............................

Comments

Popular posts from this blog