ಈ ಬಾರಿ ವಿಶ್ವಕಪ್ ನಮ್ದೇ
ankana-4
ಈ ಬಾರಿಯ ಕ್ರಿಿಕೆಟ್ ವಿಶ್ವಕಪ್ ಮುಕ್ತಾಾಯದತ್ತ ಸಾಗುತ್ತಿಿದೆ. ಸೆಮಿಫೈನಲ್ ಮತ್ತು ಫೈನಲ್ ಮಾತ್ರ ಬಾಕಿ ಉಳಿದಿದ್ದು, ಕಪ್ ಗೆಲ್ಲುವ ಅತಿ ಹೆಚ್ಚಿಿನ ಅವಕಾಶ ಹೊಂದಿರುವ ತಂಡ ಭಾರತ ಎನ್ನುವುದನ್ನು ವಿದೇಶಿ ಕ್ರಿಿಕೆಟಿಗರೇ ಹೇಳುತ್ತಿಿದ್ದಾಾರೆ. ಇಲ್ಲಿಯವರೆಗಿನ ಲೀಗ್ ಪಂದ್ಯಗಳಲ್ಲಿನ ಸಾಧನೆ ಗಮನಿಸಿದರೆ ಈ ಹೇಳಿಕೆ ನೂರರಷ್ಟು ಸತ್ಯ ಎನಿಸುತ್ತಿಿದೆ.
ದಾಖಲೆಗಳ ಮೇಲೆ ದಾಖಲೆ ಮಾಡುತ್ತಾಾ ಸಾಗಿರುವ ಯುವ, ಭರವಸೆಯ ಆಟಗಾರರು ಮತ್ತು ಅನುಭವಿಗಳ ಸಂಗಮ ಈಗಿನ ತಂಡದ ವಿಶೇಷವಾಗಿದೆ. ಇದರಿಂದಲೇ ಎಂತಹ ಸಂದರ್ಭದಲ್ಲೂ ತಂಡವನ್ನು ಮೇಲೆತ್ತಿಿರುವುದು ವಿಶ್ವಕಪ್ ಪಂದ್ಯ ವೀಕ್ಷಿಸಿದವರಿಗೆ ಗೊತ್ತಾಾಗುತ್ತದೆ. ಆರಂಭದಿಂದಲೂ ಗಮನಸೆಳೆಯುವ ಆಟವನ್ನೇ ಆಡಿ, ಮುಕ್ತಾಾಯದವರೆಗೂ ಅದನ್ನು ಮುಂದುವರೆಸಿಕೊಂಡು ಹೋಗುವ ಆಟಗಾರರು ಈ ಬಾರಿ ತಂಡದಲ್ಲಿದ್ದಾಾರೆ.
ಭಾರತದಲ್ಲಿ ಕ್ರಿಿಕೆಟ್ಗೆ ಸಿಗುವಷ್ಟು ಪ್ರೋತ್ಸಾಾಹ ಇನ್ನಾಾವ ಆಟಕ್ಕೂ ಇಲ್ಲ. ವೀಕ್ಷಕರ ಸಂಖ್ಯೆೆಯೂ ಹೆಚ್ಚು, ಜೊತೆಗೆ ಅತ್ಯಧಿಕ ಆದಾಯ ತಂದುಕೊಡುವ ಆಟವೂ ಹೌದು. ಅಷ್ಟೇ ಏಕೆ, ವಾಣಿಜ್ಯ ವಹಿವಾಟಿನಲ್ಲೂ ಮುಂದೆ. ಕ್ರಿಿಕೆಟ್ ಸರಣಿ ಅಥವಾ ಟ್ರೋೋಫಿ ಆರಂಭವಾಯಿತೆಂದರೆ ಅದಕ್ಕೆೆ ಸಂಬಂಧಿತ ವ್ಯಾಾಪಾರ- ವಹಿವಾಟು ಹೆಚ್ಚುತ್ತದೆ. ಅಂತರರಾಷ್ಟ್ರೀಯ ಕ್ರಿಿಕೆಟ್ನಲ್ಲಿ ಭಾರತೀಯ ಕ್ರಿಿಕೆಟ್ ಮಂಡಳಿಯೇ ಅತ್ಯಂತ ಶ್ರೀಮಂತವಾದುದು. ಜನರ ಉತ್ಸಾಾಹ, ಪ್ರೋತ್ಸಾಾಹದಿಂದ ಭಾರತ ತಂಡ ಬೆಳೆಯುತ್ತಲೇ ಇದೆ.
ತಂಡದ ಸಾಧನೆಯನ್ನು ನೋಡಿದಾಗ ಅಂತರರಾಷ್ಟ್ರೀಯ ಕ್ರಿಿಕೆಟ್ನಲ್ಲಿ ಭಾರತ ಮತ್ತೊೊಮ್ಮೆೆ ತನ್ನ ಪ್ರಭುತ್ವವನ್ನು ಸಾಬೀತುಪಡಿಸುವ ಅವಕಾಶ ಈ ಬಾರಿ ಎದುರಾಗಿದೆ. ವಿರಾಟ್ ಕೊಹ್ಲಿಿ ನೇತೃತ್ವದ ತಂಡವು ಶಕ್ತಿಿಯುತವಾಗಿದ್ದು, ಬ್ಯಾಾಟಿಂಗ್ನಲ್ಲಿ ಅಸಾಧಾರಣ ಸಾಧನೆ ಮಾಡುತ್ತಿಿದೆ. ಆರಂಭಿಕರಾದ ರೋಹಿತ್ ಶರ್ಮಾ, ಶಿಖರ್ ಧವನ್ ಮತ್ತು ಕೆ ಎಲ್ ರಾಹುಲ್, ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ, ಬೌಲಿಂಗ್ ವಿಭಾಗದಲ್ಲಿ ಜಸ್ಪ್ರೀತ್ ಬೂಮ್ರಾಾ, ಮೊಹಮ್ಮದ್ ಶಮಿ ಮತ್ತು ಭುವನೇಶ್ವರ ಕುಮಾರ್, ರಿಸ್ಟ್ ಸ್ಪಿಿನರ್ಸ್ ಯಜುವೇಂದ್ರ ಚಾಹಲ್ ಮತ್ತು ಕುಲದೀಪ್ ಯಾದವ್, ಆಲ್ ರೌಂಡಡರ್ಗಳಾದ ಹಾರ್ದಿಕ್ ಪಾಂಡ್ಯ, ಕೇದಾರ್ ಜಾಧವ್ ಮತ್ತು ರವೀಂದ್ರ ಜಡೇಜಾ ಈ ಬಾರಿ ಮಿಂಚಿದ್ದಾಾರೆ.
ಹಾಲಿ ನಡೆಯುತ್ತಿಿರುವ ವಿಶ್ವಕಪ್ನಲ್ಲಿ ಆಡಿದ ಎಲ್ಲ 9 ಪಂದ್ಯಗಳ ಪೈಕಿ 7ರಲ್ಲಿ ಜಯಗಳಿಸಿದೆ. ಇಂಗ್ಲೆೆಂಡ್ ವಿರುದ್ದ ಮಾತ್ರ ಪರಾಜಯ ಅನುಭವಿಸಿದರೆ, ನ್ಯೂಜಿಲೆಂಡ್ ವಿರುದ್ಧದ ಪಂದ್ಯ ಮಳೆಗೆ ಬಲಿಯಾಗಿದೆ. ರೋಹಿತ್ ಶರ್ಮಾ 9 ಪಂದ್ಯಗಳ ಪೈಕಿ 5ರಲ್ಲಿ ಶತಕ ಬಾರಿಸುವ ಮೂಲಕ ವಿಶ್ವಕಪ್ನಲ್ಲಿ ದಾಖಲೆ ಮಾಡಿದ್ದಾಾರೆ. ಈವರೆಗಿನ 13 ವಿಶ್ವಕಪ್ನಲ್ಲಿ ಯಾರೂ ಈ ದಾಖಲೆ ಮಾಡಿರಲಿಲ್ಲ. ಒಟ್ಟಾಾರೆ 9 ಪಂದ್ಯದಿಂದ 647 ರನ್ ಸಂಪಾದಿಸಿದ್ದಾಾರೆ. ಕೊಹ್ಲಿಿ 5 ಅರ್ಧಶತಕದೊಂದಿಗೆ 408 ರನ್ ಗಳಿಸಿದ್ದಾಾರೆ. ಇದೇ ಮೊದಲ ಬಾರಿ ವಿಶ್ವಕಪ್ ಆಡಿರುವ ಕರ್ನಾಟಕದ ಕೆ. ಎಲ್. ರಾಹುಲ್ ಸಹ ಚೊಚ್ಚಲ ಶತಕವನ್ನು ದಾಖಲಿಸಿದ್ದಾಾರೆ.
ಇನ್ನೊೊಂದು ದಾಖಲೆಯೆಂದರೆ, ಅಪ್ಘಾಾನಿಸ್ಥಾಾನದ ವಿರುದ್ಧ ಮೊಹಮ್ಮದ್ ಶಮಿ ಹ್ಯಾಾಟ್ರಿಿಕ್ ವಿಕೆಟ್ ಸಾಧನೆ ಮಾಡಿದ್ದು. ಇದಕ್ಕೂ ಮುನ್ನ ಈ ಸಾಧನೆಯನ್ನು ಮಾಡಿದ ಇನ್ನೊೊಬ್ಬ ಭಾರತೀಯ ಬೌಲರ್ ಎಂದರೆ ಚೇತನ್ ಶರ್ಮಾಾ. ನ್ಯೂಜಿಲೆಂಡ್ ವಿರುದ್ಧ 1987ರಲ್ಲಿ ಅವರು ಈ ಸಾಧನೆ ಮಾಡಿದ್ದರು. ಭಾರತ ಕ್ರಿಿಕೆಟ್ ತಂಡ 1983 ಮತ್ತು 2011ರಲ್ಲಿ ಎರಡು ಬಾರಿ ವಿಶ್ವಕಪ್ ಜಯಿಸಿದೆ. ಕಪಿಲ್ದೇವ್ ಮತ್ತು ಮಹೇಂದ್ರ ಸಿಂಗ್ ಧೋನಿ ಆಗ ಸಾರಥ್ಯ ವಹಿಸಿದ್ದರು. ಈ ಬಾರಿಯೂ ಸೇರಿದಂತೆ ಏಳು ಬಾರಿ ಸೆಮಿಫೈನಲ್ ಪ್ರವೇಶ ಮಾಡಿದ ತಂಡ ಭಾರತವಾಗಿದೆ. ಆಸ್ಟ್ರೇಲಿಯಾ ಮಾತ್ರ 8 ಬಾರಿ ಸೆಮಿಫೈನಲ್ ಪ್ರವೇಶಿಸಿದ ತಂಡ. ಇದನ್ನು ಹೊರತುಪಡಿಸಿದರೆ ನ್ಯೂಜಿಲೆಂಡ್ ಸಹ 7ನೆಯ ಬಾರಿ ಪ್ರವೇಶಿಸಿದೆ.
ಈ ಬಾರಿಯ ಲೀಗ್ ಆರಂಭದಿಂದಲೂ ಭಾರತ ಅತ್ಯುತ್ತಮ ಪ್ರದರ್ಶನದ ಮೂಲಕ ಮುನ್ನಡೆದಿತ್ತು. ಸೋಲನ್ನೇ ಕಾಣದ ತಂಡವಾಗಿತ್ತಾಾದರೂ ಕೊನೆಯ ಹಂತದಲ್ಲಿ ಇಂಗ್ಲೆೆಂಡ್ ವಿರುದ್ದ ಸೋಲುಂಡಿತು. ಅದನ್ನು ಬಿಟ್ಟರೆ ಉಳಿದ ತಂಡಗಳಿಗಿಂತ ಹೆಚ್ಚು ಜಯ ಸಾಧಿಸಿದ ಕೀರ್ತಿ ಭಾರತದ್ದು. ಕಲಾತ್ಮಕ ಕ್ರಿಿಕೆಟ್ಗೆ ಭಾರತ ತಂಡ ಹೆಸರು. ಪಳಗಿದ ಮತ್ತು ಅನುಭವಿಗಳ ಮಾರ್ಗದರ್ಶನದಲ್ಲಿ ಬೆಳೆದ ಯುವಕರು ಸಾಧನೆಯ ಮುಂಚೂಣಿಯಲ್ಲಿದ್ದಾಾರೆ. ದೇಶೀಯ ಕ್ರಿಿಕೆಟ್ನ್ನು ಅತಿ ಹೆಚ್ಚು ಆಡುವ ಭಾರತೀಯರಿಗೆ ಅದೇ ವಿಶೇಷ ಅನುಭವವನ್ನು ತಂದುಕೊಟ್ಟಿಿದೆ. ವಿರಾಟ್ ಕೊಹ್ಲಿಿ, ರೋಹಿತ್ ಶರ್ಮಾಾ, ಎಂ.ಎಸ್. ಧೋನಿ ದೇಶೀಯ ತಂಡ ನಡೆಸಿದ ಅನುಭವಿಕರು. ಯಾವ ತಂಡದ ವಿರುದ್ದ ಯಾವ ಬೌಲರ್ಗಳು ಸೂಕ್ತ ಎನ್ನುವುದನ್ನು ಚೆನ್ನಾಾಗಿ ಅರಿತವರು. ಸತತ ತರಬೇತಿ ಮತ್ತು ಫಿಟ್ನೆಸ್ ಹೊಂದಿದ ಬೌಲರ್ಗಳು, ಅದರಲ್ಲೂ ಇತ್ತೀಚೆಗೆ ರಿಸ್ಟ್ ಸ್ಪಿಿನರ್ಗಳು ಪಂದ್ಯದ ಗತಿಯನ್ನೇ ಬದಲಿಸುತ್ತಿಿದ್ದಾಾರೆ.
ವಿಶ್ವಶ್ರೇಷ್ಠ ಬ್ಯಾಾಟ್ಸ್ಮನ್ ಎಂಬ ಕೀರ್ತಿಗೆ ಪಾತ್ರರಾಗಿರುವ ವಿರಾಟ್ ಕೊಹ್ಲಿಿಗೆ, ಅಷ್ಟೇ ಸಾಮರ್ಥ್ಯ ತೋರುತ್ತಿಿರುವ ರೋಹಿತ್ ಶರ್ಮಾಾ ಉಪನಾಯಕರಾಗಿ ಸಿಕ್ಕಿಿದ್ದು, ಅನುಭವದ ಮೂಟೆಯೇ ಆಗಿರುವ ಮಹೇಂದ್ರ ಸಿಂಗ್ ಧೋನಿ ತಂಡವನ್ನು ಎಂತಹ ಸಂದರ್ಭದಲ್ಲೂ ಪಾರುಮಾಡಬಲ್ಲ, ಯೋಜನೆಗಳನ್ನು ರೂಪಿಸಬಲ್ಲ, ಗೆಲ್ಲಿಸಬಲ್ಲ ತಾಕತ್ತುಳ್ಳವರಾಗಿದ್ದಾಾರೆ.
ಭರತೀಯ ಕ್ರಿಿಕೆಟ್ ಮೊದಲಿನಿಂದಲೂ ಪ್ರತಿಭಾವಂತರದ್ದಾಾಗಿದೆ. ವಿಶ್ವಕಪ್ ಇತಿಹಾಸ ಗಮನಿಸಿದಾಗ ಇದು ಗೋಚರವಾಗುತ್ತದೆ. ಇಂದಿಗೂ ಇಂತಹ ಕ್ರಿಿಕೆಟ್ ದಿಗ್ಗಜರು ತಂಡದಲ್ಲಿದ್ದಾಾರೆ. ಯುವಕರ, ಅನುಭವಿಗಳ ಮತ್ತು ಹೊಸಬರ ಸಮ್ಮಿಿಶ್ರವಿರುವುದರಿಂದ ತಂಡದ ಪ್ರಗತಿ ಹೆಚ್ಚುತ್ತಲೇ ಇದೆ. ಇದು ಈ ವರ್ಷ ವಿಶ್ವಕಪ್ನಲ್ಲಿ ಮತ್ತೆೆ ಪ್ರತಿಫಲಿಸಿದೆ. ಈ ಹಿನ್ನೆೆಲೆಯಲ್ಲಿ ಭಾರತ ತಂಡ ಈ ಬಾರಿ ವಿಶ್ವಕಪ್ ಗೆಲ್ಲುವುದರಲ್ಲಿ ಅನುಮಾನವೇ ಇಲ್ಲ ಎನ್ನಬಹುದು.
published on july 6
.......................

Comments
Post a Comment