ಕ್ಷಮಿಸಿಬಿಡು ಗಾಂಧಿತಾತಾ (ಅಂಕಣ) - 6 ಗಾಂಧೀಜಿ ಭಾರತದ ಬಗ್ಗೆೆ ಯಾವ ಕನಸು ಕಂಡಿದ್ದರೋ ಅದರಲ್ಲಿ ಸ್ವಚ್ಛಭಾರತವೂ ಸೇರಿತ್ತು. ಈಗ ಮಹಾತ್ಮಾಾ ಗಾಂಧಿಯವರ ಸ್ವಚ್ಛತೆಯ ಅಭಿಯಾನವನ್ನೇ ಮುಂದುವರೆಸಿ 2019ರೊಳಗೆ ಭಾರತವನ್ನು ನಿರ್ಮಲ ಭಾರತ ಎಂದು ಘೋಷಿಸಲು ಸಿದ್ಧತೆ ನಡೆದಿದೆ. ಇದೇ ವೇಳೆ ಗ್ರಾಾಮೀಣಾಭಿವೃದ್ಧಿಿ ಇಲಾಖೆಯೂ ಸ್ವಚ್ಛಮೇವ ಜಯತೆ ಎಂಬ ಕಾರ್ಯಕ್ರಮ ರೂಪಿಸಿದೆ. ಆದರೆ ಎಲ್ಲಿ ಸ್ವಚ್ಛವಾಗಿದೆ ಎನ್ನುವುದು ಮಾತ್ರ ಯಾರಿಗೂ ಗೊತ್ತಿಿಲ್ಲ. ಯಾವುದನ್ನು ಎಲ್ಲಿ ಮಾಡಬಾರದೋ ಅದಕ್ಕೆೆ ನಾಮಫಲಕ ಹಾಕಿದರೂ ಅಲ್ಲೇ ಅದನ್ನು ಮಾಡುವ ಅಕ್ಷರಸ್ಥರು ನಾವು. ಹೀಗಾದರೆ ಯಾವುದೇ ಅಭಿಯಾನವೂ ಸಫಲತೆ ಕಾಣದು. ಶಿವಮೊಗ್ಗ ನಗರವನ್ನು ಸ್ಮಾಾರ್ಟ್ ಸಿಟಿಗೆ ಆಯ್ಕೆೆ ಮಾಡಿ ಕಾಮಗಾರಿ ನಡೆಯುತ್ತಿಿದೆ. ಇದೇ ವೇಳೆ ಇನ್ನೊೊಂದೆಡೆ ಕಸದ ಮತ್ತು ಗಲೀಜಿನ ನಗರವಾಗಿಯೂ ಮಾರ್ಪಾಡಾಗುತ್ತಿಿದೆ. ಪ್ರಧಾನಿ ನರೇಂದ್ರ ಮೋದಿ ಸ್ವಚ್ಛಭಾರತ ಅಭಿಯಾನ ಘೋಷಿಸಿದೊಡನೆ ಪೇಟೆಯಲ್ಲಿ ರಾಜಕಾರಣಿಗಳು ಪೊರಕೆ ಹಿಡಿದು ಕಸ ಹೊಡೆದು ಭಾವಚಿತ್ರ ಹಾಕಿಸಿಕೊಂಡರು. ಆದರೆ ಮುಂದೇನಾಗಿದೆ. ಕಸ ತೆಗೆದ ಜಾಗದಲ್ಲಿ ಮಾರನೆ ದಿನ ಬೆಳಿಗ್ಗೆೆಯೇ ಮತ್ತೆೆ ಕಸದ ರಾಶಿ ಬಿದ್ದಿದೆ. ಇದು ನಮ್ಮ ಜಾಗೃತಿಗೆ ಇರುವ ಪ್ರಮುಖ ಸವಾಲು. ಪ್ರಮುಖವಾಗಿ ಬಸ್ ನಿಲ್ದಾಾಣ, ರೈಲು ನಿಲ್ದಾಾಣ, ಸಂತೆ ನಡೆಯುವ ಸ್ಥಳ, ಪ್ರಮುಖ ರಸ್ತೆೆ, ವೃತ್ತಗಳು ಮೊದಲಾದೆಡೆ ಕಸವನ್ನು ಸಾಗಿಸುವುದೇ ಕಷ್ಟವಾಗಿದೆ. ಇನ್ನೂ ಕೆಲವೆಡೆ...
Posts
Showing posts from July, 2019
- Get link
- X
- Other Apps
ಕೊಡೆ ದುರಸ್ತಿಿ ವೃತ್ತಿಿ ಕಣ್ಮರೆ ಅಂಕಣ -5 ಜೂನ್ ಬಂತೆಂದರೆ ಅಂಗಡಿಗಳ ಎದುರು, ಫುಟ್ಪಾತ್ಗಳಲ್ಲಿ ಕೊಡೆಗಳ ಮಾರಾಟ ಭರ್ಜರಿಯಾಗಿ ನಡೆಯುತ್ತಿಿತ್ತು. ರೇನ್ಕೋಟ್ಗಳ, ಸ್ವೆೆಟರ್ಗಳ ಮಾರಾಟವೂ ನಡೆಯುತ್ತಿಿತ್ತು. ಇತ್ತೀಚಿನ ಕೆಲವು ವರ್ಷಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದರಿಂದ, ಕೊಡೆ ಇಲ್ಲದೆ ಕಾಲಕಳೆಯಬಹುದಾಗಿದೆ. ಎಲ್ಲೋೋ ಆಗೊಮ್ಮೆೆ- ಈಗೊಮ್ಮೆೆ ಮಳೆ ಬರುವುದರಿಂದ ಕೊಡೆ ಹಿಡಿದುಕೊಂಡೇ ಹೊರಗೆ ಹೋಗುವವರು ತೀರಾ ವಿರಳವಾಗಿದ್ದಾಾರೆ. ಆದರೆ, ಈ ವರ್ಷ ಅಲ್ಲಲ್ಲಿ ಫುಟ್ಪಾತ್ ಮೇಲೆ ಮಾತ್ರ ಕೊಡೆಗಳ ಮಾರಾಟ ಕಂಡುಬರುತ್ತಿಿದೆ. ಅಂಗಡಿಗಳಲ್ಲಿ ತೀರಾ ವಿರಳ. ಮಳೆಗಾಲವೇ ದೂರವಾದ ಮೇಲೆ ಮಾರಾಟವಾದರೂ ಎಲ್ಲಿಂದ ಸಾಧ್ಯ? ಇದರೊಟ್ಟಿಿಗೆ ಕೊಡೆ ರಿಪೇರಿಯವರೂ ಕಾಣೆಯಾಗಿದ್ದಾಾರೆ. 5-6 ವರ್ಷಗಳ ಹಿಂದಿನವರೆಗೆ ಮಳೆಗಾಲ ಅಂದರೆ ಏನೋ ಖುಷಿ. ಮೇ ತಿಂಗಳಿನಿದಲೇ ರೈತರು, ಗ್ರಾಾಮಸ್ಥರು ತಯಾರಿ ನಡೆಸುತ್ತಿಿದ್ದರು. ಆದರೆ ಈಗ ತಯಾರಿಯೇ ಇಲ್ಲ. ಮಳೆ ಯಾವಾಗ ಬರುತ್ತದೆಯೋ ಗೊತ್ತಿಿಲ್ಲ. ಹಾಗಾಗಿ ಕೊಡೆ, ಕಂಬಳಿ, ರೇನ್ಕೋಟ್ ಖರೀದಿಗೆ ಮಹತ್ವವೇ ಇಲ್ಲ. ಕೊಡೆ ದುರಸ್ತಿಿ ಮಾಡುವವರು ಪೇಟೆಯ ಬಡಾವಣೆಗಳಲ್ಲಿ ತಿರುಗುತ್ತಾಾ, ಗ್ರಾಾಮಗಳಲ್ಲಿ ಸಂಚರಿಸುತ್ತಾಾ ದುರಸ್ತಿಿಗೆ ಬರುತ್ತಿಿದ್ದರು. ಈಗ ದುರಸ್ತಿಿ ಮಾಡುವವರೇ ಕಣ್ಣಿಿಗೆ ಬೀಳುತ್ತಿಿಲ್ಲ. ಪೇಟೆಯ ಸಂದಿ- ಮೂಲೆಗಳಲ್ಲಿ ನೆಲಕ್ಕೆೆ ಪ್ಲಾಾಸ್ಟಿಿಕ್ ...
- Get link
- X
- Other Apps
ಈ ಬಾರಿ ವಿಶ್ವಕಪ್ ನಮ್ದೇ ankana-4 ಈ ಬಾರಿಯ ಕ್ರಿಿಕೆಟ್ ವಿಶ್ವಕಪ್ ಮುಕ್ತಾಾಯದತ್ತ ಸಾಗುತ್ತಿಿದೆ. ಸೆಮಿಫೈನಲ್ ಮತ್ತು ಫೈನಲ್ ಮಾತ್ರ ಬಾಕಿ ಉಳಿದಿದ್ದು, ಕಪ್ ಗೆಲ್ಲುವ ಅತಿ ಹೆಚ್ಚಿಿನ ಅವಕಾಶ ಹೊಂದಿರುವ ತಂಡ ಭಾರತ ಎನ್ನುವುದನ್ನು ವಿದೇಶಿ ಕ್ರಿಿಕೆಟಿಗರೇ ಹೇಳುತ್ತಿಿದ್ದಾಾರೆ. ಇಲ್ಲಿಯವರೆಗಿನ ಲೀಗ್ ಪಂದ್ಯಗಳಲ್ಲಿನ ಸಾಧನೆ ಗಮನಿಸಿದರೆ ಈ ಹೇಳಿಕೆ ನೂರರಷ್ಟು ಸತ್ಯ ಎನಿಸುತ್ತಿಿದೆ. ದಾಖಲೆಗಳ ಮೇಲೆ ದಾಖಲೆ ಮಾಡುತ್ತಾಾ ಸಾಗಿರುವ ಯುವ, ಭರವಸೆಯ ಆಟಗಾರರು ಮತ್ತು ಅನುಭವಿಗಳ ಸಂಗಮ ಈಗಿನ ತಂಡದ ವಿಶೇಷವಾಗಿದೆ. ಇದರಿಂದಲೇ ಎಂತಹ ಸಂದರ್ಭದಲ್ಲೂ ತಂಡವನ್ನು ಮೇಲೆತ್ತಿಿರುವುದು ವಿಶ್ವಕಪ್ ಪಂದ್ಯ ವೀಕ್ಷಿಸಿದವರಿಗೆ ಗೊತ್ತಾಾಗುತ್ತದೆ. ಆರಂಭದಿಂದಲೂ ಗಮನಸೆಳೆಯುವ ಆಟವನ್ನೇ ಆಡಿ, ಮುಕ್ತಾಾಯದವರೆಗೂ ಅದನ್ನು ಮುಂದುವರೆಸಿಕೊಂಡು ಹೋಗುವ ಆಟಗಾರರು ಈ ಬಾರಿ ತಂಡದಲ್ಲಿದ್ದಾಾರೆ. ಭಾರತದಲ್ಲಿ ಕ್ರಿಿಕೆಟ್ಗೆ ಸಿಗುವಷ್ಟು ಪ್ರೋತ್ಸಾಾಹ ಇನ್ನಾಾವ ಆಟಕ್ಕೂ ಇಲ್ಲ. ವೀಕ್ಷಕರ ಸಂಖ್ಯೆೆಯೂ ಹೆಚ್ಚು, ಜೊತೆಗೆ ಅತ್ಯಧಿಕ ಆದಾಯ ತಂದುಕೊಡುವ ಆಟವೂ ಹೌದು. ಅಷ್ಟೇ ಏಕೆ, ವಾಣಿಜ್ಯ ವಹಿವಾಟಿನಲ್ಲೂ ಮುಂದೆ. ಕ್ರಿಿಕೆಟ್ ಸರಣಿ ಅಥವಾ ಟ್ರೋೋಫಿ ಆರಂಭವಾಯಿತೆಂದರೆ ಅದಕ್ಕೆೆ ಸಂಬಂಧಿತ ವ್ಯಾಾಪಾರ- ವಹಿವಾಟು ಹೆಚ್ಚುತ್ತದೆ. ಅಂತರರಾಷ್ಟ್ರೀಯ ಕ್ರಿಿಕೆಟ್ನಲ್ಲಿ ಭಾರತೀಯ ಕ್ರಿಿಕೆಟ್ ಮಂಡಳಿಯೇ ಅತ್ಯಂತ ಶ್ರೀಮಂತವಾದುದು. ಜನ...
- Get link
- X
- Other Apps
ನೀನಿಲ್ಲದೆ (ನೈರುತ್ಯ ಮಾನ್ಸೂನ್) ನಮಗೇನಿದೆ...? ankana-3 ಎಲ್ಲಿ ನೋಡಿದರೂ ಮಳೆಗೆ ಹಾಹಾಕಾರ. ಮಳೆ ಇನ್ನೂ ಬಂದಿಲ್ಲವಲ್ಲ ಎಂಬ ಮಾತು. ಮೇಳಗಾಲದ ಛಾಯೆಯೇ ಮಾಯವಾಗಿ ಬಿಸಿಲು ಸುಡುತ್ತಿಿದೆ. ಕರಾವಳಯಿಂದ ಘಟ್ಟ ಏರದ ಮುಂಗಾರು ಜನರ ನಿರಿಕ್ಷೆಯನ್ನು ಹುಸಿಗೊಳಿಸಿದೆ. ಭೂಮಿಯ ಮತ್ತು ಪರಿಸರದ ವಾತಾವರಣವನ್ನು ಹಾಳು ಮಾಡಿದ್ದು ಬುದ್ಧಿಿವಂತನಾದ ಮಾನವ. ಪ್ರಕೃತಿ ಎಷ್ಟು ಸೂಕ್ಷ್ಮವಾಗಿದೆ ಎಂದರೆ ನಾವಿಂದು ಮಳೆ ಕಾಡುಗಳನ್ನು ನಾಶ ಮಾಡಿಕೊಂಡು ನಗರೀಕರಣವೇ ನಮ್ಮ ಪ್ರಗತಿ ಎಂಬ ದಾರಿಯಲ್ಲಿ ಜೀವನಕ್ಕೆೆ ಆಧಾರವಾದ ಜೀವನದಿಗಳನ್ನು ಒಂದಕ್ಕೊೊಂದು ಜೋಡಣೆ ಮಾಡುತ್ತ ಸಾವಿರಾರು ಕಿಲೋಮೀಟರ್ ದೂರದ ಬರಗಾಲದ ಪ್ರದೇಶಗಳಿಗೆ ನೀರುಣಿಸುವ ವಿಚಾರವನ್ನಿಿಟ್ಟುಕೊಂಡು ಪ್ರಗತಿಯನ್ನು ಮಾಡುತ್ತಿಿದ್ದೇವೆ. ನೀರಿಲ್ಲದ ಜಾಗಗಳಿಗೆ ನೀರು ಕೊಡುವ ವಿಚಾರಗಳು ಒಳ್ಳೆೆಯ ವಿಚಾರಗಳೇ. ಒಪ್ಪಬಹುದು. ಆದರೆ, ಅನಗತ್ಯವಾಗಿ ನದಿಗಳನ್ನು ಅವು ಹರಿಯುವ ದಿಕ್ಕಿಿಗೆ ಬಿಡುವುದರ ಬದಲು ಬೇಕೆಂದ ಹಾಗೆ ಜೋಡಣೆ ಮಾಡಿ ಅವ್ಯವಸ್ಥೆೆ ಮಾಡುತ್ತಿಿದ್ದೇವೆ. ನದಿಗಳ ತಂಟೆಗೆ ಎಂದೂ ಹೋಗಬರದು. ಏಕೆಂದರೆ ಒಂದು ನದಿಗೆ ಅನೇಕ ಕಡೆ ಅಣೆಕಟ್ಟುಗಳನ್ನು ಕಟ್ಟಿಿದರೆ ಆ ನದಿಯ ನೀರು ಸಮುದ್ರಕ್ಕೆೆ ಹೋಗಿ ಸೇರುವ ಅಂಶ ಕಡಿಮೆಯಾಗುತ್ತದೆ. ಇದರಿಂದ ಸಮುದ್ರದಲ್ಲಿರುವ ಜೀವಿಗಳ ಬದುಕು ಅಸ್ತವ್ಯಸ್ತವಾಗುತ್ತದೆ. ಕಾರಣ ಪ್ರವಾಹಗಳಿಂದ ನದಿಗಳಲ್ಲಿ ಕೊಚ್ಚಿಿ ಹೋಗುವ ಭೂಮಿಯಲ್ಲಿನ ...
- Get link
- X
- Other Apps
ವಿವೇಚನಾಹೀನ ಯೋಜನೆ ವಿರುದ್ಧ ಚಳವಳಿ ಅಗತ್ಯ anakan-2 ಲಿಂಗನಮಕ್ಕಿಿಯಿಂದ ಬೆಂಗಳೂರಿಗೆ ಕುಡಿಯುವ ನೀರನ್ನು ಒಯ್ಯುವ ಪ್ರಸ್ತಾಾಪ ಈಗ ಜಿಲ್ಲೆೆಯಲ್ಲಿ ಹೋರಾಟದ ಕಾವನ್ನು ಪಡೆದುಕೊಂಡಿದೆ. ಚಳವಳಿ ರೂಪದಲ್ಲಿ ಇದನ್ನು ಪ್ರಬಲವಾಗಿ ವಿರೋಧಿಸಲು ಸಾಹಿತಿಗಳು, ಪರಿಸರ ಹೋರಾಟಗಾರರು, ಮಠಾಧೀಶರು, ರಾಜಕೀಯ ಮತ್ತು ಸಂಘ-ಸಂಸ್ಥೆೆಗಳ ಮುಖಂಡರು ಹೆಜ್ಜೆೆ ಇಟ್ಟಿಿದ್ದಾಾರೆ. ಸರ್ಕಾರದ ವಿವೇಚನಾಹೀನ ವಿಚಾರಗಳು ಎಷ್ಟೊೊಂದು ಅನಾಹುತವನ್ನು ಸೃಷ್ಟಿಿಸುತ್ತವೆ ಎನ್ನುವುದಕ್ಕೆೆ ಇದೊಂದು ಉತ್ತಮ ಉದಾಹರಣೆ. ಶರಾವತಿ ನದಿ ಮಲೆನಾಡಿನ ನಾಡಿ ಮಿಡಿತ, ಇಲ್ಲಿನ ಜನರ ಬದುಕಿನೊಂದಿಗೆ ಹಾಸುಹೊಕ್ಕಾಾಗಿದೆ, ಮಲೆನಾಡಿನ ಹೆಗ್ಗುರುತಾಗಿದೆ. ಅದೊಂದು ಜೀವನದಿ. ಅದು ಜೋಗ ಜಲಪಾತವನ್ನು ಸೃಷ್ಟಿಿಸಿ ಜಿಲ್ಲೆೆಗೆ ಹೊಸ ಮೆರುಗನ್ನೇ ತಂದುಕೊಟ್ಟಿಿದೆ. ಮಲೆನಾಡಿನ ಜೊತೆ ಶರಾವತಿ ಹೊಂದಿರುವುದು ಕರುಳಬಳ್ಳಿಿಯ ಸಂಬಂಧ. ಇನ್ನೊೊಂದು ಅರ್ಥದಲ್ಲಿ ಹೇಳಬೇಕೆಂದರೆ ಅಮ್ಮ-ಮಕ್ಕಳ ಸಂಬಂಧ. ನಮ್ಮೆೆಲ್ಲರ ಬದುಕಿನ ಭಾಗವಾಗಿರುವ ಶರಾವತಿಗೆ ಈಗ ಅಪಾಯ ಬಂದೊದಗಿದೆ. ಈ ನದಿಯ ಲಿಂಗನಮಕ್ಕಿಿ ಅಣೆಕಟ್ಟಿಿನಿಂದ ಸುಮಾರು 433 ಕಿ. ಮೀ. ದೂರವಿರುವ ಬೆಂಗಳೂರಿಗೆ ನೀರನ್ನು ಒಯ್ಯುವ ಯೋಜನೆ ಇದಾಗಿದೆ. ರಾಕ್ಷಸನಂತೆ ಬೆಳೆಯುತ್ತಿಿರುವ ಬೆಂಗಳೂರಿಗೆ ಕುಡಿಯುವ ನೀರು ಒದಗಿಸುವ ಸಮಸ್ಯೆೆ ಎದುರಾದಾಗ 2010ರಲ್ಲಿ ಸಮಿತಿಯೊಂದು ನೀಡಿದ ವರದಿಯು ಉಪಮುಖ್ಯಮಂತ್ರಿಿ ಪರಮೇಶ್ವರ್ ಅವರಿಗೆ ನೆನಪಾಗಿ, ...
- Get link
- X
- Other Apps
ಸರ್ಕಾರಿ ಶಾಲೆಗಳನ್ನು ಮೇಲೆತ್ತುವುದು ಹೇಗೆ? anakana-1 ರಾಜ್ಯದಲ್ಲಿ ಉತ್ತಮ ಗುಣಾತ್ಮಕ ಶಿಕ್ಷಣ ಕೊಡುವಲ್ಲಿ ಸರ್ಕಾರಿ ಶಾಲೆಗಳು ಸಂಪೂರ್ಣ ಸೋತಿವೆ ಎನ್ನುವ ಮಾತಿನಲ್ಲಿ ಸ್ವಲ್ಪವೂ ಸುಳ್ಳಿಿಲ್ಲ. ಸಮರ್ಥ ಶಿಕ್ಷಕರಿದ್ದರೂ, ಬಹುತೇಕ ಶಾಲೆಗಳಲ್ಲಿ ಮೂಲಸೌಕರ್ಯವಿದ್ದರೂ, ಮಕ್ಕಳ ಸಂಖ್ಯೆೆ ಗಣನೀಯ ಕುಸಿತ ಕಾಣುತ್ತಿಿದೆ. ಎಲ್ಲಿಯವರೆಗೆ ನಮ್ಮ ಶಾಲೆಗಳು ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಭರವಸೆ ಕೊಡುವುದಿಲ್ಲವೋ ಅಲ್ಲಿಯವರೆಗೆ ಪಾಲಕರು ಈ ಶಾಲೆಗೆ ಮಕ್ಕಳನ್ನು ಕಳುಹಿಸುವುದಿಲ್ಲ. ಸರ್ಕಾರ ಎಲ್ಲಾಾ ಸೌಕರ್ಯವನ್ನು ಕಲ್ಪಿಿಸಿದರೂ ಅದು ಶಾಲೆಗಳಿಗೆ ತಲುಪುತ್ತಿಿಲ್ಲ. ಮಲೆನಾಡಿನ ಶಾಲೆಗಳ ದುಃಸ್ಥಿಿತಿಯನ್ನು ಗಮನಿಸಿದರೆ ಇದು ಅರ್ಥವಾಗುತ್ತದೆ. ಬೀಳಲು ಸಿದ್ಧವಾಗಿರುವ 50 ವರ್ಷಕ್ಕೂ ಹೆಚ್ಚಿಿನ ಕಟ್ಟಡಗಳು, ಆವರಣ ಗೋಡೆ ಮತ್ತು ಗೇಟು ಇಲ್ಲದ ಶಾಲೆಗಳೇ ಹೆಚ್ಚಿಿವೆ. ಅದರಲ್ಲೂ ಗ್ರಾಾಮಾಂತರ ಶಾಲೆಗಳಲ್ಲಿ ಇದನ್ನು ಹೆಚ್ಚಾಾಗಿ ಕಾಣಬಹುದು. ಸಮರ್ಥ ಎಂದು ಕಂಡುಬಂದ ಶಿಕ್ಷಕರನ್ನೇ ಸರ್ಕಾರ ನೇಮಿಸಿಕೊಳ್ಳುತ್ತಿಿದೆ. ಆದರೂ ವರ್ಷದಿಂದ ವರ್ಷಕ್ಕೆೆ ದಾಖಲಾತಿ ಕುಸಿಯುತ್ತಿಿದೆ. ಗುಣಮಟ್ಟದ ಶಿಕ್ಷಣ ಕೊಡುವಲ್ಲಿ ನಾವೇಕೆ ಸೋತಿದ್ದೇವೆ ಎನ್ನುವುದನ್ನು ಅವಲೋಕಿಸಿದಾಗ, ಕೆಲವು ಪ್ರಮುಖ ಅಂಶಗಳು ಕಂಡುಬರುತ್ತವೆ. ಕರ್ನಾಟಕ ಸ್ಕೂಲ್ ಕ್ವಾಾಲಿಟಿ ಅಸೆಸ್ಮೆಂಟ್ ಮತ್ತು ಅಕ್ರೆೆಡೇಶನ್ ಕಮಿಟಿಯು ಈ ಬಗ್ಗೆೆ ವರದಿ ಸಿದ್ಧಪಡಿಸಿದ...