ಕೊಡೆ ದುರಸ್ತಿಿ ವೃತ್ತಿಿ ಕಣ್ಮರೆ

 ಅಂಕಣ  -5




 ಜೂನ್ ಬಂತೆಂದರೆ ಅಂಗಡಿಗಳ ಎದುರು, ಫುಟ್‌ಪಾತ್‌ಗಳಲ್ಲಿ ಕೊಡೆಗಳ ಮಾರಾಟ ಭರ್ಜರಿಯಾಗಿ ನಡೆಯುತ್ತಿಿತ್ತು. ರೇನ್‌ಕೋಟ್‌ಗಳ, ಸ್ವೆೆಟರ್‌ಗಳ ಮಾರಾಟವೂ ನಡೆಯುತ್ತಿಿತ್ತು. ಇತ್ತೀಚಿನ ಕೆಲವು ವರ್ಷಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದರಿಂದ, ಕೊಡೆ ಇಲ್ಲದೆ ಕಾಲಕಳೆಯಬಹುದಾಗಿದೆ. ಎಲ್ಲೋೋ ಆಗೊಮ್ಮೆೆ- ಈಗೊಮ್ಮೆೆ ಮಳೆ ಬರುವುದರಿಂದ ಕೊಡೆ ಹಿಡಿದುಕೊಂಡೇ ಹೊರಗೆ ಹೋಗುವವರು ತೀರಾ ವಿರಳವಾಗಿದ್ದಾಾರೆ.   
 ಆದರೆ, ಈ ವರ್ಷ ಅಲ್ಲಲ್ಲಿ ಫುಟ್‌ಪಾತ್ ಮೇಲೆ ಮಾತ್ರ ಕೊಡೆಗಳ ಮಾರಾಟ ಕಂಡುಬರುತ್ತಿಿದೆ. ಅಂಗಡಿಗಳಲ್ಲಿ ತೀರಾ ವಿರಳ. ಮಳೆಗಾಲವೇ ದೂರವಾದ ಮೇಲೆ ಮಾರಾಟವಾದರೂ ಎಲ್ಲಿಂದ ಸಾಧ್ಯ? ಇದರೊಟ್ಟಿಿಗೆ ಕೊಡೆ ರಿಪೇರಿಯವರೂ ಕಾಣೆಯಾಗಿದ್ದಾಾರೆ. 5-6 ವರ್ಷಗಳ ಹಿಂದಿನವರೆಗೆ ಮಳೆಗಾಲ ಅಂದರೆ ಏನೋ ಖುಷಿ. ಮೇ ತಿಂಗಳಿನಿದಲೇ ರೈತರು, ಗ್ರಾಾಮಸ್ಥರು ತಯಾರಿ ನಡೆಸುತ್ತಿಿದ್ದರು. ಆದರೆ ಈಗ ತಯಾರಿಯೇ ಇಲ್ಲ. ಮಳೆ ಯಾವಾಗ ಬರುತ್ತದೆಯೋ ಗೊತ್ತಿಿಲ್ಲ. ಹಾಗಾಗಿ ಕೊಡೆ, ಕಂಬಳಿ, ರೇನ್‌ಕೋಟ್ ಖರೀದಿಗೆ ಮಹತ್ವವೇ ಇಲ್ಲ.
 ಕೊಡೆ ದುರಸ್ತಿಿ ಮಾಡುವವರು ಪೇಟೆಯ ಬಡಾವಣೆಗಳಲ್ಲಿ ತಿರುಗುತ್ತಾಾ, ಗ್ರಾಾಮಗಳಲ್ಲಿ ಸಂಚರಿಸುತ್ತಾಾ ದುರಸ್ತಿಿಗೆ ಬರುತ್ತಿಿದ್ದರು. ಈಗ ದುರಸ್ತಿಿ ಮಾಡುವವರೇ ಕಣ್ಣಿಿಗೆ ಬೀಳುತ್ತಿಿಲ್ಲ. ಪೇಟೆಯ ಸಂದಿ- ಮೂಲೆಗಳಲ್ಲಿ ನೆಲಕ್ಕೆೆ ಪ್ಲಾಾಸ್ಟಿಿಕ್ ಹಾಕಿಕೊಂಡು ಒಂದಷ್ಟು ಹಾಳಾದ ಛತ್ರಿಿಗಳು, ಕೊಡೆಯ ಬಿಡಿಭಾಗಗಳನ್ನು ಇಟ್ಟುಕೊಂಡು ಕುಳಿತುಕೊಳ್ಳುತ್ತಿಿದ್ದರು. ಹಳೆಯ ಕೊಡೆಗಳು ದುರಸ್ತಿಿಗೆ ಬರುತ್ತಿಿದ್ದವು.
ಹಳ್ಳಿಿಗಳಲ್ಲಿ ಭಾನುವಾರ ತಪ್ಪದೇ ಕೊಡೆ ದುರಸ್ತಿಿಗೆ ಪೇಟೆಯಿಂದ ಡಬ್ಬಿಿಯ ಬಾಕ್‌ಸ್‌ ಹೊತ್ತು, ಅದರಲ್ಲಿ ದುರಸ್ತಿಿಯ ವಸ್ತುಗಳನ್ನು ತುಂಬಿಕೊಂಡು ಬರುತ್ತಿಿದ್ದರು. ಅಂದು ರಜಾದಿನವಾಗಿರುವುದರಿಂದ ಎಲ್ಲರೂ ಮನೆಯಲ್ಲೇ ಹೆಚ್ಚಾಾಗಿ ಇರುವುದರಿಂದ ಅವರಿಗೆ ಒಂದಷ್ಟು ಬಿಸಿನೆಸ್ ಆಗುತ್ತಿಿತ್ತು. ಹಳ್ಳಿಿಯವರಿಗೂ ಅಂದು ಬರುತ್ತಾಾರೆಂದು ಗೊತ್ತಿಿರುತ್ತಿಿತ್ತು. ಅವರಿಗಾಗಿ ಕಾಯುತ್ತಿಿದ್ದರು. ಖಾಯಂ ಆಗಿ ಬರುತ್ತಿಿದ್ದರಿಂದ ಅವರೆಲ್ಲರೂ ಹಳ್ಳಿಿಗರಿಗೆ ಪರಿಚಿತರಾಗಿಯೇ ಇರುತ್ತಿಿದ್ದರು. 
ಈಗ ಕೊಡೆ ರಿಪೇರಿಯನ್ನೇ ನಂಬಿಕೊಂಡರೆ ಅವರಿಗೆ ಕಾಸು ದಕ್ಕುವುದಿಲ್ಲ. ಹೋಗಲಿ, ಅವರನ್ನು ಮಾತನಾಡಿಸುವವರೂ ಇಲ್ಲ. ಕೊಡೆ ದುರಸ್ತಿಿಯ ದರವೂ ಮೊದಲಿನ 2-3 ಪಟ್ಟು ಜಾಸ್ತಿಿಯಾಗಿದೆ. ಈಗ ಆಟೊಮ್ಯಾಾಟಿಕ್ ಛತ್ರಿಿ ಜಾಸ್ತಿಿ. ಅದರ ದುರಸ್ತಿಿಯೂ ಕಷ್ಟವೇ.  ಆದ್ದರಿಂದ ದರ ಹೆಚ್ಚು ಕೇಳುತ್ತಾಾರೆ. ಇತ್ತೀಚೆಗೆ ಚಪ್ಪಲಿ ದುರಸ್ತಿಿ ಮಾಡುವವರು ಮಾತ್ರ ಅಲ್ಲಲ್ಲಿ ಛತ್ರಿಿ ದುರಸ್ತಿಿ ಮಾಡುತ್ತಿಿದ್ದಾಾರೆ. ಒಂದನ್ನೇ ನಂಬಿಕೊಂಡರೆ ಜೀವನ ಸಾಗದು ಎನ್ನುವುದು ಅವರಿಗೆ ಗೊತ್ತಾಾಗಿದೆ. ಮಳೆಗಾಲದ ಜೊತೆಗೆ ಕೊಡೆಯೂ ಮಾಯವಾಗುತ್ತಿಿರುವುದರಿಂದ ಅದರ ದುರಸ್ತಿಿ ಮಾಡುವವರೂ ಕಂಡುಬರುತ್ತಿಿಲ್ಲ. ಇವರು ಇದನ್ನೇ ನಂಬಿ ಜೀವನ ಮಾಡುತ್ತಿಿದ್ದರು. ಮಳೆ ಕೈಕೊಟ್ಟಿಿದ್ದರಿಂದ ಇವರೂ ನಿರುದ್ಯೋೋಗಿಗಳೋ ಅಥವಾ ಬೇರೆ ಉದ್ಯೋೋಗ ನೋಡಿಕೊಳ್ಳುವಂತೆಯೋ  ಆಗಿದೆ.
   ಕೊಡೆ ರಿಪೇರಿ ಎಂದು ಕೂಗುತ್ತ ಪೇಟೆಯಲ್ಲಿ ಓಡಾಡುತ್ತಿಿದ್ದವರೂ ಮಳೆಗಾಲ ಆರಂಭವಾದಾಗ ಕಣ್ಣೆೆದುರು ಬರುತ್ತಿಿದ್ದರು. ಈಗ ಅವರನ್ನು ಕೇಳುವವರಿಲ್ಲ. ಆ ವೃತ್ತಿಿಯೇ ಇಲ್ಲದಂತಾಗಿದೆ. ಕೊಡೆ ಹಾಳಾದರೂ ಇನ್ನು ರಿಪೇರಿ ಮಾಡುವವರು ಸಿಗದ ಸ್ಥಿಿತಿ ಎದುರಾಗಿದೆ. ಜನರ ಬಳಿ ಕೊಡೆಗಳಿವೆ. ಆದರೆ ಮಳೆ ಬಂದರೆ ಮಾತ್ರ ಅದರ ದುರಸ್ತಿಿ. ಇಲ್ಲವಾದರೆ ಮನೆ ಮೂಲೆಯಲ್ಲಿ ಬಿದ್ದಿರುತ್ತದೆ. ಮಳೆಗಾಲದ ಈ ಮಿತ್ರನೂ ಇನ್ನು ಕಣ್ಮರೆಯಾಗುವಂತಾಗಿದ್ದಾಾನೆ.
ಕೊಡೆ ಹಿಡಿದು ಮಳೆಯಲ್ಲಿ ಓಡಾಡುವುದೇ ಒಂದು ಸೊಗಸಾಗಿತ್ತು. ಬಟ್ಟೆೆಯ ದೊಡ್ಡ ಕಪ್ಪು ಕೊಡೆಗಳು ಒಂದಷ್ಟು ವರ್ಷ ರಾರಾಜಿಸಿದವರಾದರೂ ಆನಂತರ ಬಣ್ಣ-ಬಣ್ಣದ ಚಿಕ್ಕ ಕೊಡೆಗಳು ಆ ಸ್ಥಾಾನವನ್ನು ಆಕ್ರಮಿಸಿಕೊಂಡವು. ಈಗ ಪಾಕೆಟ್ ಕೊಡೆಗಳೂ ಬಂದಿವೆ. ಇದೇ ರೀತಿ ಮಳೆ ಹೋಗಿಬಿಟ್ಟರೆ ಇನ್ನು ಕೆಲವೇ ವರ್ಷಗಳಲ್ಲಿ ಕೊಡೆಗಳನ್ನು ಬಿಸಿಲು ಕೊಡೆಗಳನ್ನಾಾಗಿ  ಪರಿವರ್ತಿಸಿಕೊಳ್ಳಬೇಕಾಗುತ್ತದೆ. ಬಿಸಿಲಿನ ಪ್ರಮಾಣ ಅಧಿಕವಾಗುತ್ತಿಿರುವುದರಿಂದ ಓಡಾಡುವವರು ಅದನ್ನು ಹಿಡಿಯಲೇಬೇಕಾದ ಸ್ಥಿಿತಿ ನಿರ್ಮಾಾಣವಾಗುತ್ತದೆ. ಆದರೆ ಅಂದಿನ ರೀತಿಯಲ್ಲಿ ಕೊಡೆ ರಿಪೇರಿ ಮಾಡುವವರು ಮಾತ್ರ ಇನ್ನು ಸಿಗೊಲ್ಲ.
ಒಂದು ವೃತ್ತಿಿ ಹೇಗೆ ನಾಶವಾಗುತ್ತದೆ ಎನ್ನುವುದಕ್ಕೆೆ ಇದೊಂದು ಉತ್ತಮ ಉದಾಹರಣೆ. ಮಳೆಗಾಲದಲ್ಲಿ ಮಾತ್ರ ದುರಸ್ತಿಿ ಮಾಡುತ್ತ, ಉಳಿದ ಕಾಲಗಳಲ್ಲಿ ಬೇರೆ ಬೇರೆ ವಸ್ತುಗಳನ್ನು ಮಾರಾಟ ಮಾಡುತ್ತಿಿದ್ದವರಿಗೂ ಮಳೆಗಾಲ ಇಲ್ಲದೆ ಬಿಸಿ ತಟ್ಟಿಿದೆ. ನಮ್ಮೆೆಲ್ಲರನ್ನು ಮಳೆಗಾಲದಲ್ಲಿ ಮಳೆನೀರಿನಿಂದ ರಕ್ಷಿಸುತ್ತಿಿದ್ದ ಕೊಡೆಯನ್ನು ಇನ್ನು ಮುಂದೆ ದುರಸ್ತಿಿಗೊಳಿಸುವವರನ್ನೂ ಸಹ ಹುಡುಕುವ ಸ್ಥಿಿತಿ ಬಂದೀತು. 

published on july 8
,,,,,,,,,,,,,,,,,,,,,,,,,,,,,,, 



................................

Comments

Popular posts from this blog